Hijab Issue Raked Up In CFI Conference In Mangaluru | Public TV

2022-07-16 0

ಮಂಗಳೂರಿನಲ್ಲಿ ಮತ್ತೆ ಹಿಜಬ್ ವಿವಾದ ಪ್ರತಿಧ್ವನಿಸಿದೆ. ಸಿಎಫ್‍ಐ ನೇತೃತ್ವದಲ್ಲಿ ನಡೆದ ಗಲ್ರ್ಸ್ ಕಾನ್ಫರೆನ್ಸ್‍ನಲ್ಲಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಕಾಲೇಜಿನ ಆಡಳಿತ ಮಂಡಳಿ ಯಶ್‍ಪಾಲ್ ಸುವರ್ಣ, ಶಾಸಕ ರಘುಪತಿ ಭಟ್ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಪೂರ್ವಾನುಮತಿ ಇಲ್ಲದೇ ಮೆರವಣಿಗೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸ್ ಆಯುಕ್ತ ಶಶಿಕುಮಾರ್ ತಡೆದು ವಾರ್ನಿಂಗ್ ಮಾಡಿ ಕಳಿಸಿದ್ದಾರೆ. ಇನ್ನು ಸಮ್ಮೇಳನದಲ್ಲಿ ಅಣುಕು ಪ್ರದರ್ಶನ ಮಾಡಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ರು.

#publictv #mangaluru #hijabrow